ಇಂಡಿಯನ್ ರಮ್ಮಿ
ಎಲ್ಲಾ ಜನಪ್ರಿಯ ಇಂಡಿಯನ್ ಗೇಮ್ ಗಳಿಗೆ ಹೋಲಿಸಿದರೆ, ಖಂಡಿತವಾಗಿಯೂ ಇಂಡಿಯನ್ ರಮ್ಮಿ ಕಾರ್ಡ್ ಗೇಮ್ ಅಗ್ರಸ್ಥಾನವನ್ನು ಪಡೆಯುತ್ತದೆ. ಇದನ್ನು ಕ್ಲಾಸಿಕಲ್ ರಮ್ಮಿ ಆಡುವ ರೀತಿಯಲ್ಲಿ ಆಡಲಾಗುತ್ತದೆ ಮತ್ತು ಸಾಮಾನ್ಯವಾಗಿ ಭಾರತದಲ್ಲಿ ಇದನ್ನು ’ಪಪ್ಲು’ ಎಂದು ಕರೆಯಲಾಗುತ್ತದೆ. ಇದರ ಮೂಲ ಮತ್ತು ಇತಿಹಾಸ ಅಸ್ಪಷ್ಟವಾಗಿ ತಿಳಿದಿದ್ದರೂ ಸಹ, ಹಲವಾರು ದಶಕಗಳಿಂದ ಇಂಡಿಯನ್ ರಮ್ಮಿಯನ್ನು ಆಡಲಾಗುತ್ತಿದೆ. ಇದು ಗಿನ್ ರಮ್ಮಿ ಮತ್ತು ರಮ್ಮಿ 500 ಎಂಬ ಜನಪ್ರಿಯ ಯುಎಸ್-ಆಧಾರಿತ ಗೇಮ್ ಗಳ ಸಂಯೋಜನೆಯೆಂದು ವ್ಯಾಪಕವಾಗಿ ನಂಬಲಾಗಿದೆ ಮತ್ತು ಮೋಜುಮಯವಾಗಿದೆ! ಇದು ಗೇಮ್, ಕಿಟ್ಟಿ ಪಾರ್ಟಿಗಳಲ್ಲಿ, ವಿವಾಹ ಸಮಾರಂಭಗಳಲ್ಲಿ, ಉತ್ಸವಗಳಲ್ಲಿ ಮತ್ತು ರೈಲುಗಳಲ್ಲಿ ಸಹ ಆಡುವಂತಹ ಅಚ್ಚುಮೆಚ್ಚಿನ ಗೇಮ್ ಆಗಿದೆ.
ಇಂಡಿಯನ್ ರಮ್ಮಿಯ ವಿಧಗಳು
ಈ ಗೇಮ್ ನಲ್ಲಿ 2 ವಿಧಗಳಿವೆ
- 13 ಕಾರ್ಡ್
- 21 ಕಾರ್ಡ್
13 ಕಾರ್ಡ್ ಗೇಮ್ ಅತಿವೇಗದಲ್ಲಿ ಮುಕ್ತಾಯವಾಗುವ ಕಾರಣದಿಂದಾಗಿ ಹೆಚ್ಚು ಜನಪ್ರಿಯವಾಗಿದೆ, ಆದುದರಿಂದ ನಾವು ಇಲ್ಲಿ ಈ ವಿಧದ ಕುರಿತು ವಿವರಿಸುತ್ತೇವೆ.
ಇಂಡಿಯನ್ ರಮ್ಮಿಯ ಪದಪಟ್ಟಿ
ಹೆಚ್ಚಿನ ಗೇಮ್ ಗಳಲ್ಲಿರುವಂತೆ, ಗೇಮ್ ಪ್ರಗತಿಯಲ್ಲಿರುವಾಗ ನೀವು ಎದುರಿಸಬಹುದಾದ ಕೆಲವು ಪದಗಳನ್ನು ಇಂಡಿಯನ್ ರಮ್ಮಿ ಹೊಂದಿದೆ. ಇದರಲ್ಲಿ ಪ್ರಮುಖವಾದುದು:
ಶಫಲ್ - ಶಫಲ್ ಮಾಡುವುದರಿಂದ ಪ್ರತಿ ಆಟಗಾರರಿಗೆ ಅವಕಾಶವನ್ನು ಒದಗಿಸಲಾಗುತ್ತದೆ. ಇದರಿಂದ ಮುಂದಿನ ಕಟ್ಟಿಂಗ್ ನಲ್ಲಿ ಯಾವುದೇ ಮಾನಿಪುಲೇಷನ್ ಮಾಡಲಾಗುವುದಿಲ್ಲ.
ಡಿಸ್ಕಾರ್ಡ್ - ಒಂದು ಕಾರ್ಡ್ ಅನ್ನು ಆಯ್ಕೆ ಮಾಡುವುದೆಂದರೆ ಮತ್ತೊಂದು ಕಾರ್ಡ್ ಅನ್ನು ಬೇಡವೆಂದು ಬಿಡುವುದು. ಬೇಡವೆಂದು ಬಿಡಲಾದ ಕಾರ್ಡ್ ಗಳು ಪ್ರತ್ಯೇಕ ಗುಂಪನ್ನು ರೂಪಿಸುತ್ತದೆ.
ಡೆಡ್ ವುಡ್ - ಯಾವುದೇ ಸೆಟ್ ಅಥವಾ ಸೀಕ್ವೆನ್ಸ್ ಗಳಾಗಿ ರೂಪಿಸಲಾಗದ ಕಾರ್ಡ್ ಗಳನ್ನು ಡೆಡ್ ವುಡ್ ಎಂದು ವರ್ಗೀಕರಿಸಲಾಗುತ್ತದೆ.
ಕೌಂಟ್ - ಇದು ಆಟಗಾರನ ಡೆಡ್ ವುಡ್ ನ ಅಂಕಗಳ ಒಟ್ಟು ಸಂಖ್ಯೆ.
ಡ್ರಾಪ್ - ಇದು ನೀವು ಮಾಡಲು ಬಯಸದ ವಿಷಯವಾಗಿದೆ – ನಿಮ್ಮ ಸರದಿ ಬರುವ ಮೊದಲೇ ಗೇಮ್ ಅನ್ನು ಬಿಡುವುದು.
ಇಂಡಿಯನ್ ರಮ್ಮಿಯ ನಿಯಮಗಳು
ಕನಿಷ್ಠ 2 ಸೀಕ್ವೆನ್ಸ್ ಗಳೊಂದಿಗೆ ಎಲ್ಲಾ ಕಾರ್ಡ್ ಗಳನ್ನು ಸರಿಯಾದ ಸೀಕ್ವೆನ್ಸ್ ಗಳು ಮತ್ತು ಸೆಟ್ ಗಳಾಗಿ ಹೊಂದಿಸುವ ಉದ್ದೇಶದಿಂದ ಈ ಗೇಮ್ ಅನ್ನು 2 ಡೆಕ್ ಕಾರ್ಡ್ ಗಳೊಂದಿಗೆ 2 ರಿಂದ 6 ಆಟಗಾರರ ನಡುವೆ ಆಡಲಾಗುತ್ತದೆ, ಇಲ್ಲಿ ಎರಡು ಸೀಕ್ವೆನ್ಸ್ ಗಳಲ್ಲಿ ಒಂದು ಪ್ಯೂರ್ ಸ್ವೀಕ್ವೆನ್ಸ್ ಆಗಿರಬೇಕು ಮತ್ತು ಉಳಿದಿರುವ ಕಾರ್ಡ್ ಗಳು ಯಾವುದೇ ಮಾನ್ಯ ಸೀಕ್ವೆನ್ಸ್ ಅಥವಾ ಸೆಟ್ ಗಳು ಆಗಿರಬಹುದು. ಪ್ರತೀ ಡೆಕ್ 52 ಕಾರ್ಡ್ ಗಳು + 2 ಪ್ರಿಂಟೆಡ್ ಜೋಕೆರ್ ಗಳನ್ನು ಹೊಂದಿರುತ್ತದೆ.
ಸೀಕ್ವೆನ್ಸ್ ಎಂದರೇನು?
ಪ್ಯೂರ್ ಸೀಕ್ವೆನ್ಸ್ ಎಂದರೇನು?
ಸೆಟ್ ಎಂದರೇನು?
ಜೋಕರ್ ಯಾವುದು?
ಇಂಡಿಯನ್ ರಮ್ಮಿ ಕಾರ್ಡ್ ಗೇಮ್ ನಲ್ಲಿ 2 ಜೋಕರ್ ಗಳಿರುತ್ತದೆ.
- ಪ್ರಿಂಟೆಡ್ ಜೋಕರ್ ಅಥವಾ ವೈಲ್ಡ್ ಕಾರ್ಡ್
- ಕಾರ್ಡ್ ಅನ್ನು ವಿತರಿಸಿದ ನಂತರ ಮತ್ತು ಗೇಮ್ ಆರಂಭವಾಗುವ ಮೊದಲು ಡೆಕ್ ನಿಂದ ಯಾದೃಚ್ಛಿಕ ಕಾರ್ಡ್ ಅನ್ನು ಆಯ್ಕೆ ಮಾಡಲಾಗುತ್ತದೆ. ಉದಾಹರಣೆಗೆ. ಯಾದೃಚ್ಛಿಕ ಕಾರ್ಡ್ 8 (ಯಾವುದೇ ಸೂಟ್ ನ) ಅನ್ನು ಆಯ್ಕೆ ಮಾಡಿದರೆ, ಎಲ್ಲಾ ಸೂಟ್ ನ 8 ಗಳನ್ನು ಜೋಕರ್ ಎಂದು ಪರಿಗಣಿಸಲಾಗುತ್ತದೆ.
ಜೋಕರ್ ನ ಪ್ರಾಮುಖ್ಯತೆ ಏನು?
ಇಂಡಿಯನ್ ರಮ್ಮಿ ಗೇಮ್ ನಲ್ಲಿ ಜೋಕರ್ ಬಹಳ ಉಪಯುಕ್ತವಾದುದು, ಏಕೆಂದರೆ ಇದನ್ನು ಇತರ ಯಾವುದೇ ಕಾರ್ಡ್ ಗೆ ಬದಲಿಯಾಗಿ ಉಪಯೋಗಿಸಬಹುದು. ಉದಾಹರಣೆಗೆ., ನೀವು ಈಗಾಗಲೇ ನಿಮ್ಮ 2 ಕಡ್ಡಾಯ ಸೀಕ್ವೆನ್ಸ್ ಗಳನ್ನು ಮಾಡಿದ್ದರೆ ಮತ್ತು ನಿಮ್ಮ ಗೇಮ್ ಅನ್ನು ಮುಗಿಸಲು ಒಂದೇ ಕಾರ್ಡ್ ಅಗತ್ಯವಿದ್ದರೆ, ನೀವು ನಿರ್ದಿಷ್ಟ ಕಾರ್ಡ್ ಗಾಗಿ ಕಾಯುವ ಅವಶ್ಯಕತೆ ಇಲ್ಲ. ನಿಮ್ಮ ಸೆಟ್ ಅಥವಾ ಸೀಕ್ವೆನ್ಸ್ ಅನ್ನು ಪೂರ್ಣಗೊಳಿಸಲು ಮತ್ತು ನಿಮ್ಮ ಗೇಮ್ ಅನ್ನು ಘೋಷಿಸಲು ನೀವು ನಿರ್ದಿಷ್ಟ ಕಾರ್ಡ್ ಗೆ ಬದಲಾಗಿ ಜೋಕರ್ ಅನ್ನು ಬಳಸಬಹುದು. ಒಂದು ವೇಳೆ ನಿಮ್ಮಲ್ಲಿ ಸ್ಪೇಡ್ 2, 3 ಮತ್ತು 5 ಇದ್ದು, 8 ಜೋಕರ್ ಆಗಿದ್ದಲ್ಲಿ, ನಿಮ್ಮ ಸೀಕ್ವೆನ್ಸ್ ಅನ್ನು ಮಾಡಲು ಜೋಕರ್ ಅನ್ನು ಸ್ಪೇಡ್ 4 ಎಂದು ಬಳಸಬಹುದು. ಇದು ಇಪ್ಯೂರ್ ಸೀಕ್ವೇನ್ಸ್ ಆಗುತ್ತದೆ, ಇದು ನೀವು ಪ್ಯೂರ್ ಸೀಕ್ವೆನ್ಸ್ ಅನ್ನು ಹೊಂದಿದ್ದರೆ ಮಾತ್ರ ಮಾನ್ಯವಾಗುವುದು.
ಇಂಡಿಯನ್ ರಮ್ಮಿಯಲ್ಲಿ ಜೋಕರ್ ಗಳು ಇರುವುದು ತಮಾಷೆಗಲ್ಲ
ಇಂಡಿಯನ್ ರಮ್ಮಿ ಗೇಮ್ ನಲ್ಲಿ ಜೋಕರ್ 0 ಪಾಯಿಂಟ್ ಗಳನ್ನು ಹೊಂದಿದ್ದರೂ, ಅದರ ಪ್ರಾಮುಖ್ಯತೆಯನ್ನು ಅಲ್ಲಗಳೆಯುವಂತಿಲ್ಲ. ನಿಮ್ಮ ಗೇಮ್ ಅನ್ನು ಗೆಲ್ಲಿಸುವಂತಹ ಎರಡು ಸೀಕ್ವೆನ್ಸ್ ಗಳಲ್ಲಿ, ಒಂದು ಸೀಕ್ವೆನ್ಸ್ ಅನ್ನು ರೂಪಿಸಲು ಜೋಕರ್ ಸಹಾಯ ಮಾಡುತ್ತದೆ.ರೂಢಿಯಲ್ಲಿನ13 ಕಾರ್ಡ್ ರಮ್ಮಿಯಲ್ಲಿರುವುದಕ್ಕೆ ವಿರುದ್ಧವಾಗಿ, 21 ಕಾರ್ಡ್ ರಮ್ಮಿಯಲ್ಲಿ ಎರಡು ಜೋಕರ್ ಗಳಿರುತ್ತವೆ.
ಇವುಗಳು
ಪ್ರಿಂಟೆಡ್ ಜೋಕರ್ - ಇದು ಡೆಕ್ ನಲ್ಲಿರುವ 53ನೇ ಕಾರ್ಡ್ ಅಗಿರುತ್ತದೆ
ಯಾದೃಚ್ಛಿಕವಾಗಿ ಆಯ್ಕೆ ಮಾಡಲಾಗಿರುವ ಜೋಕರ್ - ಇದು ಗೇಮ್ ಆರಂಭವಾಗುವ ಮೊದಲು ಯಾದೃಚ್ಛಿಕವಾಗಿ ಆಯ್ಕೆ ಮಾಡಿರುವ ಕಾರ್ಡ್, ಇದು ಈ ನಿರ್ದಿಷ್ಟ ಗೇಮ್ ಗೆ ಜೋಕರ್ ಆಗುತ್ತದೆ.
ಇಂಡಿಯನ್ ರಮ್ಮಿ ಆಡುವುದು ಹೇಗೆ
ಈಗ ನೀವು ರಮ್ಮಿಯ ಪ್ರಮುಖ ನಿಯಮಗಳ ತಿಳಿವಳಿಕೆಯನ್ನು ಪಡೆದುಕೊಂಡಿದ್ದೀರಿ, ನಿಖರವಾಗಿ ರಮ್ಮಿಯನ್ನು ಹೇಗೆ ಆಡುವುದು ಎಂದು ನೋಡೋಣ. ಇದು ಸರಳ, ವ್ಯವಸ್ಥಿತವಾದ ಪ್ರಕ್ರಿಯೆಯಾಗಿದೆ.
ಡೀಲರ್ ಅನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡಲಾಗುತ್ತದೆ. ನಂತರ ಕಾರ್ಡ್ ಗಳನ್ನು ವಿತರಿಸಲು ಪ್ರತಿ ಆಟಗಾರನಿಗೆ ಅವಕಾಶ ಸಿಗುತ್ತದೆ
ಶಫಲ್ ಮತ್ತು ಡೀಲ್: ಡೆಕ್ ಅನ್ನು ಶಫಲ್ ಮಾಡಲಾಗುತ್ತದೆ, ಮತ್ತು ಒಮ್ಮೆಗೆ ಒಂದು ಕಾರ್ಡ್ ನಂತೆ ಪ್ರತೀ ಆಟಗಾರನಿಗೆ 13 ಕಾರ್ಡ್ ಗಳನ್ನು ವಿತರಿಸಲಾಗುತ್ತದೆ.
ಓಪನ್ ಕಾರ್ಡ್: ಒಮ್ಮೆ ಕಾರ್ಡ್ ಗಳನ್ನು ವಿತರಿಸಿದ ನಂತರ, ಗೇಮ್ ಆರಂಭಿಸಲು ಮೇಲಿನಲ್ಲಿರುವ ಕಾರ್ಡ್ ಅನ್ನು ಮೇಲ್ಮುಖವಾಗಿ ಇರಿಸಲಾಗುತ್ತದೆ. ಗೇಮ್ ಆರಂಭಿಸುವವರು ಈ ಓಪನ್ ಕಾರ್ಡ್ ಅನ್ನು ಉಪಯೋಗಿಸಲೂ ಬಹುದು ಅಥವಾ ಉಪಯೋಗಿಸದೇ ಇರಬಹುದು.
ಜೋಕರ್: ಡೀಲರ್ ಡೆಕ್ ನಿಂದ ಯಾದೃಚ್ಛಿಕ ಕಾರ್ಡ್ ಅನ್ನು ಆಯ್ಕೆ ಮಾಡುತ್ತಾನೆ, ಇದನ್ನು ಆ ಗೇಮ್ ನಲ್ಲಿ ಜೋಕರ್ ಎಂದು ಪರಿಗಣಿಸಲಾಗುತ್ತದೆ. ಈಗ ಗೇಮ್ ಆರಂಭವಾಗುತ್ತದೆ
ಆಯ್ಕೆಮಾಡುವುದು ಮತ್ತು ಬೇಡವೆಂದು ಬಿಡುವುದು: ಪ್ರತಿ ಆಟಗಾರನು ಆತ/ಆಕೆಯ ಸರದಿಯಲ್ಲಿ, ಡೆಕ್ ನಿಂದ ಅಥವಾ ಓಪನ್ ಕಾರ್ಡ್ ಅನ್ನು ಆಯ್ಕೆ ಮಾಡುತ್ತಾನೆ. ನಂತರ ಆಟಗಾರನು ಹೊಂದಿರುವ ಬೇಡವಾದ ಯಾವುದಾದರೂ ಒಂದು ಕಾರ್ಡ್ ಅನ್ನು ಎಸೆಯಬೇಕಾಗುತ್ತದೆ. ಪ್ರತೀ ಸುತ್ತಿನ ಕೊನೆಯಲ್ಲಿ ಆಟಗಾರರು ಕೇವಲ 13 ಕಾರ್ಡ್ ಗಳನ್ನು ಮಾತ್ರ ಹೊಂದಿರಬೇಕು.
ಗೇಮ್ ಅನ್ನು ಘೋಷಿಸುವುದು: ಎಲ್ಲಾ ಕಾರ್ಡ್ ಗಳನ್ನು ಮಾನ್ಯ ಸೆಟ್ ಗಳು ಮತ್ತು ಸೀಕ್ವೆನ್ಸ್ ಗಳಾಗಿ (ಕನಿಷ್ಠ ಒಂದು ಪ್ಯೂರ್ ಸೀಕ್ವೆನ್ಸ್ ಇರುವಂತೆ) ಹೊಂದಿಸಬೇಕು. ಮುಕ್ತಾಯ ಸ್ಲಾಟ್ ನಲ್ಲಿ 14ನೇ ಕಾರ್ಡ್ ಅನ್ನು ಎಸೆಯಬೇಕಾಗುತ್ತದೆ. ಇದು ಗೇಮ್ ನ ಒಂದು ಸುತ್ತನ್ನು ಮುಕ್ತಾಯಗೊಳಿಸುತ್ತದೆ.
ಇಂಡಿಯನ್ ರಮ್ಮಿ ಸಲಹೆಗಳು ಮತ್ತು ತಂತ್ರಗಳು
ರಮ್ಮಿ ಕೌಶಲದ ಗೇಮ್ ಆಗಿದ್ದು, ಆಟಗಾರನು ಆ ಕೌಶಲವನ್ನು ವೃದ್ಧಿಸುವ ಅಗತ್ಯವಿದೆ. ಇದು ಕೇವಲ ಅಭ್ಯಾಸದಿಂದ ಮಾತ್ರ ಸಾಧ್ಯ. ಅದಾಗಿಯೂ, ನೀವು ಗೇಮ್ ನಲ್ಲಿ ಅಗ್ರಸ್ಥಾನದಲ್ಲಿ ಉಳಿದುಕೊಳ್ಳಲು ಸಹಾಯ ಮಾಡಲು ಕೆಲವು ವಿಷಯಗಳು ಕೆಳಗಿವೆ.
ಸಾಧ್ಯವಾದಷ್ಟು ಬೇಗ ನೀವು ಪ್ಯೂರ್ ಸೀಕ್ವೆನ್ಸ್ ಅನ್ನು ಹೊಂದುವುದೇ ಪ್ರಾಥಮಿಕ ಸಲಹೆಯಾಗಿದೆ. ಒಮ್ಮೆ ನೀವು ಅದನ್ನು ಹೊಂದಿದ ನಂತರ, ಜೋಕರ್ ಗಳನ್ನು ಸರಿಯಾಗಿ ಬಳಸಿಕೊಂಡು ನೀವು ಕಾರ್ಡ್ ಗಳನ್ನು ಮರುಹೊಂದಿಸಬಹುದು ಮತ್ತು ನಿಮ್ಮ ಪಾಯಿಂಟ್ ಗಳನ್ನು ಕಡಿಮೆಗೊಳಿಸಲು ಪ್ರಯತ್ನಿಸಬಹುದು.
ಪ್ಯೂರ್ ಸೀಕ್ವೆನ್ಸ್ 3 ಅಥವಾ ಅದಕ್ಕಿಂತ ಹೆಚ್ಚಿನ ಕಾರ್ಡ್ ಗಳನ್ನು ಹೊಂದಬಹುದು: ಇದರಲ್ಲಿ 4 ಅಥವಾ 5 ಕಾರ್ಡ್ ಗಳಿರಬಹುದು. ಆರು ಕಾರ್ಡ್ ಗಳೊಂದಿಗೆ, ಎರಡು ಸೀಕ್ವೆನ್ಸ್ ಗಳಾಗುತ್ತವೆ, ಹಾಗಾಗಿ ನಿಮ್ಮ ಅರ್ಧದಷ್ಟು ಕೆಲಸ ಮುಗಿದಿರುತ್ತದೆ! ಇದು ಸ್ಪಷ್ಟವಾದುದು ಆದರೆ ಬಹಳ ಉಪಯುಕ್ತ ಸಲಹೆಯಾಗಿದೆ. ನಿಮ್ಮ ಗೇಮ್ ಪ್ಲೇ ಮೇಲೆ ಗಮನ ಕೇಂದ್ರೀಕರಿಸುವಾಗ, ನಿಮ್ಮ ಪ್ರತಿಸ್ಪರ್ಧಿಗಳ ಗೇಮ್ ಅನ್ನು ಗಮನಿಸುವುದು ಸಹ ಮುಖ್ಯವಾಗಿದೆ. ಪ್ರತಿಸ್ಪರ್ಧಿಯು ಬೇಡವೆಂದು ಬಿಡಲಾದ ಕಾರ್ಡ್ ಗಳು ಮತ್ತು ಕಾರ್ಡ್ ಗಳ ಗುಂಪಿನಿಂದ ಆಯ್ಕೆ ಮಾಡಲಾದ ಕಾರ್ಡ್ ಗಳನ್ನು ಗಮನಿಸುವುದರಿಂದ, ನಿಮ್ಮ ಪ್ರತಿಸ್ಪರ್ಧಿಗಳು ಹೊಂದಿರುವ ಕಾರ್ಡ್ ಗಳು ಯಾವುದು ಎಂದು ಸೂಚಿಸುತ್ತದೆ. ಇದರಿಂದ ನಿಮ್ಮ ಸ್ವಂತ ಗೇಮ್ ಅನ್ನು ಹೇಗೆ ಮುಂದುವರಿಸುವುದು ಎಂದು ತಿಳಿಯುತ್ತದೆ.
ಜೋಕರ್ ಗೆ ಹತ್ತಿರವಿರುವ ಕಾರ್ಡ್ ಗಳನ್ನು ಎಸೆಯುವುದು ಒಂದು ಉತ್ತಮ ತಂತ್ರ ಏಕೆಂದರೆ ಪ್ರತಿಸ್ಪರ್ಧಿಯು ಅದನ್ನು ಬಳಸುವ ಸಾಧ್ಯತೆಗಳು ಕಡಿಮೆ ಇರುತ್ತವೆ. ಮತ್ತು ನೀವು ಖಂಡಿತವಾಗಿಯೂ ನಿಮ್ಮ ಸ್ವಂತ ಗೇಮ್ ಅನ್ನು ಬಿಟ್ಟುಬೇರೆಯವರ ಗೇಮ್ ಗೆ ಸಹಾಯ ಮಾಡಲು ಬಯಸುವುದಿಲ್ಲ! ರಮ್ಮಿ ಕೇವಲ ಗೆಲ್ಲುವ ಗೇಮ್ ಮಾತ್ರವಲ್ಲದೇ ನಷ್ಟಗಳನ್ನು ನಿರ್ವಹಿಸುವ ಕುರಿತಾಗಿದೆ ಎಂದು ಬುದ್ಧಿವಂತ ಆಟಗಾರನಿಗೆ ತಿಳಿದಿದೆ.
ಉನ್ನತ ಮೌಲ್ಯದ ಕಾರ್ಡ್ ಗಳು ಸೆಟ್ ಅಥವಾ ಸೀಕ್ವೆನ್ಸ್ ಅನ್ನು ಪೂರೈಸದಿದ್ದರೆ ಅವುಗಳನ್ನು ಬಿಟ್ಟುಬಿಡುವುದೇ ಒಳ್ಳೆಯದು. ನೀವು ಆಡುತ್ತಿರುವಾಗ, ನಿಮ್ಮ ವೈಯಕ್ತಿಕ ಸಲಹೆಗಳನ್ನು ಮತ್ತು ತಂತ್ರಗಳನ್ನು ಅಭಿವೃದ್ಧಿಗೊಳಿಸುವಿರಿ. ಈಗ, ಈ ಮಾಹಿತಿಯು ನಿಮಗೆ ಮತ್ತು ನಿಮ್ಮ ಪ್ರತಿಸ್ಪರ್ಧಿಗೆ ಲಭ್ಯವಿದೆ. ಹಾಗಾಗಿ ಸಮಯ ವ್ಯರ್ಥ ಮಾಡಬೇಡಿ. ಈಗಲೇ ರಮ್ಮಿ ಆಡಲು ಆರಂಭಿಸಿ.
ಪದಕೋಶ
ಇಂಡಿಯನ್ ರಮ್ಮಿ ಆಡುವಾಗ ನೀವು ಎದುರಿಸುವ ಕೆಲವು ಪದಗಳು
ಕೌಂಟ್: ಇದು ಆಟಗಾರನ ಡೆಡ್ ವುಡ್ ನ ಅಂಕಗಳ ಒಟ್ಟು ಸಂಖ್ಯೆ.
ಡೆಡ್ ವುಡ್: ಯಾವುದೇ ಸೆಟ್ ಅಥವಾ ಸೀಕ್ವೆನ್ಸ್ ಗಳಾಗಿ ರೂಪಿಸಲಾಗದ ಕಾರ್ಡ್ ಗಳನ್ನು ಡೆಡ್ ವುಡ್ ಎಂದು ವರ್ಗೀಕರಿಸಲಾಗುತ್ತದೆ.
ಡಿಸ್ಕಾರ್ಡ್: ಒಂದು ಕಾರ್ಡ್ ಅನ್ನು ಆಯ್ಕೆ ಮಾಡಿದರೆ ಮತ್ತೊಂದು ಕಾರ್ಡ್ ಅನ್ನು ಬೇಡವೆಂದು ಎಸೆಯಬೇಕಾಗುತ್ತದೆ. ಇದನ್ನು ಡಿಸ್ಕಾರ್ಡಿಂಗ್ ಎಂದು ಕರೆಯಲಾಗುತ್ತದೆ. ಬೇಡವೆಂದು ಬಿಡಲಾದ ಕಾರ್ಡ್ ಗಳು ಪ್ರತ್ಯೇಕ ಗುಂಪನ್ನು ರೂಪಿಸುತ್ತದೆ.
ಡ್ರಾಪ್: ನಿಮ್ಮ ಕಾರ್ಡ್ ಗಳು ಸಾಕಷ್ಟು ಉತ್ತಮವಿಲ್ಲ ಎಂದಾದರೆ, ನಿಮ್ಮ ನಷ್ಟವನ್ನು ಕಡಿಮೆಗೊಳಿಸಲು ನೀವು ಯಾವುದೇ ಸಮಯದಲ್ಲಾದರೂ ಗೇಮ್ ಅನ್ನು ಬಿಡಬಹುದು.
ಮೆಲ್ಡ್: ಕಾರ್ಡ್ ಗಳ ಸಂಯೋಜನೆಯನ್ನು ಮೆಲ್ಡ್ ಎಂದು ಕರೆಯುತ್ತಾರೆ. ಆಟಗಾರನು ಕಾರ್ಡ್ ಗಳನ್ನು ಸೀಕ್ವೆನ್ಸ್ ಅಥವಾ ಸೆಟ್ ಗಳಾಗಿ ಹೊಂದಿಸಿದರೆ, ಅದನ್ನು ಮೆಲ್ಡಿಂಗ್ ಎಂದು ಕರೆಯುತ್ತಾರೆ./p>
ಇಂಡಿಯನ್ ರಮ್ಮಿ ಟೂರ್ನಮೆಂಟ್ ಗಳು
ನಾವು ರಮ್ಮಿಸರ್ಕಲ್ ನಲ್ಲಿ ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಆಧಾರದ ಮೇಲೆ ಅನೇಕ ಟೂರ್ನಮೆಂಟ್ ಗಳನ್ನು ನಡೆಸುತ್ತೇವೆ. ದೇಶದಾದ್ಯಂತವಿರುವ ಜನರ ವಿರುದ್ಧ ನಿಮ್ಮ ಚಾತುರ್ಯವನ್ನು ಹೊಂದಿಸಿ! ನಿಮ್ಮ ಕೌಶಲಗಳನ್ನು ಸುಧಾರಿಸಲು ನೀವು ಕ್ಯಾಶ್ ರಮ್ಮಿ ಆಡಬಹುದು ಅಥವಾ ಗೇಮ್ ಗಳನ್ನು ಅಭ್ಯಾಸಮಾಡಬಹುದು.
ಇಂಡಿಯನ್ ರಮ್ಮಿ ಗೇಮ್ ಅನ್ನು ಸೆಟ್ ಮಾಡುವುದು ಮತ್ತು ಆಡುವುದು
ಇಂಡಿಯನ್ ರಮ್ಮಿ ಗೇಮ್ ಅನ್ನು ಆರಂಭಿಸುವ ಮೊದಲು, ಡೀಲರ್ ಅನ್ನು ಡ್ರಾ ವ್ಯವಸ್ಥೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಶಫಲ್ ಮಾಡಿರುವ ಕಾರ್ಡ್ ಗಳ ಪ್ಯಾಕ್ ನಿಂದ ಪ್ರತೀ ಆಟಗಾರನು ಒಂದು ಕಾರ್ಡ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಅತ್ಯಂತ ಕಡಿಮೆ ಮೊತ್ತದ ಕಾರ್ಡ್ ಅನ್ನು ಆಯ್ಕೆ ಮಾಡಿದವರು ಮೊದಲು ಡೀಲಿಂಗ್ ಮಾಡಬೇಕಾಗುತ್ತದೆ. ಡೀಲರ್ ಅನ್ನು ನಿರ್ಧರಿಸುವ ಈ ಲಾಟರಿ, ಗೇಮ್ ಪ್ರಾರಂಭಕ್ಕೆ ಮುಂಚಿತವಾಗಿ ಎಲ್ಲಾ ಆಟಗಾರರು ಯಾವ ಸ್ಥಾನಗಳನ್ನು ಪಡೆಯುತ್ತಾರೆ ಎಂಬುದನ್ನು ನಿಗದಿಪಡಿಸುತ್ತದೆ.
ಈಗ, ಡೀಲರ್ ಅನ್ನು ನಿರ್ಧರಿಸಿದ ನಂತರ, ಆಯ್ಕೆ ಮಾಡಲಾದ ವ್ಯಕ್ತಿಯು ಕಾರ್ಡ್ ಗಳನ್ನು ಶಫಲ್ ಮಾಡುತ್ತಾನೆ ಮತ್ತು ತಕ್ಷಣದ ಎಡಭಾಗದಲ್ಲಿರುವ ಆಟಗಾರನಿಗೆ ಪ್ಯಾಕ್ ಅನ್ನು ತೋರಿಸುತ್ತಾನೆ. ಈ ಆಟಗಾರ ಶಫಲ್ ಮಾಡಿರುವ ಪ್ಯಾಕ್ ನಿಂದ ಒಂದು ಕಾರ್ಡ್ ಅನ್ನು ತೆಗೆಯುತ್ತಾನೆ ಮತ್ತು ಅದನ್ನು ಮೇಲ್ಮುಖವಾಗಿರಿಸುತ್ತಾನೆ. ಈ ಕಾರ್ಡ್ ಅನ್ನು ನಿರ್ದಿಷ್ಟ ಇಂಡಿಯನ್ ರಮ್ಮಿ ಗೇಮ್ ನ ಜೋಕರ್ ಎಂದು ನಿಗದಿಪಡಿಸಲಾಗುತ್ತದೆ.
ಉದಾಹರಣೆಗೆ, ಹಾರ್ಟ್ 7 ಜೋಕರ್ ಎಂದು ಆಯ್ಕೆ ಮಾಡಿದರೆ, 7 ಸಂಖ್ಯೆಯನ್ನು (ಇತರ ಸೂಟ್ ಗಳನ್ನು ಒಳಗೊಂಡು) ಹೊಂದಿರುವ ಎಲ್ಲಾ ಕಾರ್ಡ್ ಗಳನ್ನು ಆ ಗೇಮ್ ಗೆ ಜೋಕರ್ ಎಂದು ಪರಿಗಣಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಆಯ್ದ ಕಾರ್ಡ್ ಪ್ರಿಂಟೆಂಡ್ ಜೋಕರ್ ಆಗಿದ್ದರೆ, ಇನ್ನೊಂದು ಪ್ರಿಂಟೆಂಡ್ ಕಾರ್ಡ್ ಲಭ್ಯವಿದ್ದಲ್ಲಿ, ಅದನ್ನು ಜೋಕರ್ ಎಂದು ನಿರ್ಧರಿಸಲಾಗುತ್ತದೆ.
ಒಂದು ಪ್ಯೂರ್ ಸೀಕ್ವೆನ್ಸ್ ಅನ್ನು ಒಳಗೊಂಡಿರುವ, ಕನಿಷ್ಠ ಎರಡು ಸೀಕ್ವೆನ್ಸ್ ಗಳನ್ನು ಆಟಗಾರನು ಘೋಷಿಸಿದಾಗ, ಇಂಡಿಯನ್ ರಮ್ಮಿ ಗೇಮ್ ಮುಕ್ತಾಯವಾಗುತ್ತದೆ.
ಸ್ಕೋರಿಂಗ್:
ನೀವು ಕಡಿಮೆ ಪಾಯಿಂಟ್ ಗಳನ್ನು ಹೊಂದಿದ್ದರೆ, ಉತ್ತಮ! ಆಟಗಾರನು ಮಾನ್ಯ ಘೋಷಣೆ ಮಾಡಿದಾಗ, ಅವನು/ಅವಳು 0 ಪಾಯಿಂಟ್ ಅನ್ನು ಪಡೆಯುತ್ತಾರೆ. ಮಾನ್ಯ ಸೀಕ್ವೆನ್ಸ್ ಅಥವಾ ಸೆಟ್ ಗಳಾಗಿ ಗುಂಪು ಮಾಡದ ಕಾರ್ಡ್ ಗಳ ಆಧಾರದ ಮೇಲೆ ಉಳಿದ ಆಟಗಾರರು ಪಾಯಿಂಟ್ ಗಳನ್ನು ಪಡೆಯುತ್ತಾರೆ. A, K, Q, J ಮೌಲ್ಯ 10 ಪಾಯಿಂಟ್ ಆಗಿರುತ್ತದೆ, ಮತ್ತು ಉಳಿದ ಕಾರ್ಡ್ ಗಳ ಪಾಯಿಂಟ್ ಗಳು ಅದರ ಮುಖ ಬೆಲೆಯ ಆಧಾರದ ಮೇಲೆ ಇರುತ್ತದೆ. ಜೋಕರ್ ಗಳು 0 ಪಾಯಿಂಟ್ ಗಳನ್ನು ಹೊಂದಿದೆ.
ಒಂದು ವೇಳೆ ಆಟಗಾರನು ಅಮಾನ್ಯ ಘೋಷಣೆಯನ್ನು (ಆಟದ ಉದ್ದೇಶವನ್ನು ಪೂರೈಸದೆ ಘೋಷಿಸಿದರೆ) ಮಾಡಿದರೆ, ಆ ಆಟಗಾರನು 80 ಪಾಯಿಂಟ್ ಗಳನ್ನು ಪಡೆಯುತ್ತಾನೆ.
ರಮ್ಮಿ ಗೇಮ್ ಡೌನ್ ಲೋಡ್:
ಇದೀಗ ನೀವು ಆಂಡ್ರಾಯ್ಡ್ ಮತ್ತು ಐಒಎಸ್ ನಲ್ಲಿ ನಿಮ್ಮ ನೆಚ್ಚಿನ ರಮ್ಮಿ ಗೇಮ್ ಅನ್ನು ಯಾವ ಸಮಯದಲ್ಲಾದರೂ, ಎಲ್ಲಿಬೇಕಾದರೂ ಆಡಬಹುದು. ರಮ್ಮಿಸರ್ಕಲ್ ಆಪ್ ನಲ್ಲಿ ಗೇಮ್ ಅನ್ನು ಆಡುವಾಗ ಸಿಗುವ ಕೆಲವು ಪ್ರಯೋಜನಗಳು ಯಾವುದೆಂದರೆ, ಬಳಕೆದಾರ ಸ್ನೇಹಿ ಇಂಟರ್ ಫೆೀಸ್, ವಿಶಿಷ್ಟ ಫೀಚರ್ ಗಳು ಮತ್ತು ತಕ್ಷಣದ ಬೋನಸ್ ಕೊಡುಗೆಯೊಂದಿಗೆ ಉತ್ತಮ ಗೇಮ್ ಆಡುವ ಅನುಭವ. ಸಾಗುತ್ತಲೇ ಆಡಲು ಅವಕಾಶ ನೀಡುವ ಅಪ್ಲಿಕೇಷನ್ ಅನ್ನು ಮಿಸ್ ಮಾಡಿಕೊಳ್ಳಬೇಡಿ. ಇಲ್ಲಿ ಕ್ಲಿಕ್ ಮಾಡಿ - ರಮ್ಮಿ ಗೇಮ್ ಆಪ್ ಡೌನ್ ಲೋಡ್ ಮಾಡಿ ಮತ್ತು ಎಂದಿಗೂ ಬೇಸರಗೊಳ್ಳದಿರಿ!
ಮೊಬೈಲ್ ವೆಬ್ ಸೈಟ್ webtopiaservicestech.com ನಲ್ಲಿ ಸಹ ನೀವು ಗೇಮ್ ಆಡಬಹುದು. ನಮ್ಮ ಎಲ್ಲಾ ಆಟಗಾರರಿಗೆ ಉತ್ತಮ ಅನುಭವವನ್ನು ನೀಡಲು ನಾವು ಪ್ರಯತ್ನಿಸುತ್ತೇವೆ.
₹ 40,000 ವಿಜೇತ
ಮಿಡ್ ಡೇ ಬ್ಲಾಕ್ ಬಸ್ಟರ್ ಫಿನಾಲೆ
₹ 50,000 ವಿಜೇತ
ಮಿಡ್-ಡೇ ಬ್ಲಾಕ್ ಬಸ್ಟರ್ ಫಿನಾಲೆ
₹ 65,000 ವಿಜೇತ
ಮಿಡ್ ಡೇ ಬ್ಲಾಕ್ ಬಸ್ಟರ್ ಫಿನಾಲೆ
₹ 3,00,000 ವಿಜೇತ
ಸಂಕ್ರಾಂತಿ ಫಿನಾಲೆ
86000 ಗೆದ್ದಿದ್ದಾರೆ
ಮಿಡ್ ಡೇ ಬ್ಲಾಕ್ ಬಸ್ಟರ್ ಫಿನಾಲೆ
ರೂ. 5 ಲಕ್ಷ ವಿಜೇತ
ದೀಪಾವಳಿ ರಮ್ಮಿ ಟೂರ್ನಮೆಂಟ್ (DRT 2019)
ಫಾಸ್ಟ್ ಲೇನ್ ಫ್ರೈಡೇ ಯಲ್ಲಿನ
ರೂ. 5,60,268.33 ವಿಜೇತ
ರೂ. 46689 ವಿಜೇತ
ಫಾಸ್ಟ್ ಲೇನ್ ಫ್ರೈಡೇ
ನಮ್ಮ ಬೆಂಬಲಕ್ಕಾಗಿ ಸಂಪರ್ಕಿಸಿ
ನಿಮಗೆ ಅತ್ಯುತ್ತಮ ರಮ್ಮಿ ಅನುಭವಗಳನ್ನುTM ನೀಡಲು 24x7 ಎಲ್ಲಾ ಸಮಯದಲ್ಲಿಯೂ ರಮ್ಮಿ ಸರ್ಕಲ್ ಬೆಂಬಲ ತಂಡವು ಲಭ್ಯವಿರುತ್ತಾರೆ. info@webtopiaservicestech.com ನಲ್ಲಿ ನಿಮ್ಮ ನೋಂದಾಯಿತ ಇಮೇಲ್ ಐಡಿ ಯಿಂದ ನಮ್ಮ ಗ್ರಾಹಕ ಬೆಂಬಲ ತಂಡವನ್ನು ಸಂಪರ್ಕಿಸಿ ಮತ್ತು ನಿಮ್ಮ ಕಳವಳ ಅಥವಾ ಸಮಸ್ಯೆಯನ್ನು ಹಂಚಿಕೊಳ್ಳಿ. ಕೂಡಲೇ ನಿಮಗೆ ಪರಿಹಾರವನ್ನು ಒದಗಿಸಲು ನಮ್ಮ ಪ್ರತಿನಿಧಿಯು ನಿಮ್ಮನ್ನು ಸಂಪರ್ಕಿಸುತ್ತಾನೆ.